ಅದ್ಧೂರಿಯಾಗಿ ನಡೆದ ತೂಬಗೆರೆ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಬ್ರಹ್ಮರಥೋತ್ಸವ

ತಾಲೂಕಿನ ಇತಿಹಾಸ ಪ್ರಸಿದ್ಧ ತೂಬಗೆರೆಯ ಶ್ರೀ ಪ್ರಸನ್ನ ಲಕ್ಷ್ಮಿ ವೆಂಕಟರಮಸ್ವಾಮಿ ಬ್ರಹ್ಮರಥೋತ್ಸವ ಇಂದು ಮಧ್ಯಾಹ್ನ 12-30 ರಿಂದ 1-15 ರೊಳಗಿನ ಅಭಿಜಿನ್ ಲಗ್ನದಲ್ಲಿ ಅದ್ಧೂರಿಯಾಗಿ ನೆರವೇರಿತು.

ಬಿರು ಬಿಸಿಲಿನ ನಡುವೆ ಬ್ರಹ್ಮ ರಥೋತ್ಸವಕ್ಕೆ ಜಿಲ್ಲೆಯ ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡು‌, ರಥಕ್ಕೆ ಬಾಳೆಹಣ್ಣು ದವನ ಎಸೆದು ಸ್ವಾಮಿಯ ಕೃಪೆಗೆ ಪಾತ್ರರಾದರು.

ಬ್ರಹ್ಮರಥೋತ್ಸವಕ್ಕೆ ಮುನ್ನ ರಥೋತ್ಸವಕ್ಕೆ ಹೂವಿನ ಅಲಂಕಾರ ಸಿಂಗಾರ ಮಾಡಿ ರಥಾಂಗ ಹೋಮ, ರಥಾಂಗ ಪ್ರತಿಷ್ಠೆ ಗಣಪತಿ ಹೋಮಗಳನ್ನು ಮಾಡಿ ಪೂಜಾ ಕಾರ್ಯಕ್ರಮಗಳು ನೆರವೇರಿಸಲಾಯಿತು.

ಬ್ರಹ್ಮರಥೋತ್ಸದ ಪ್ರಯುಕ್ತ ದೇಗುಲವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು.

ರಥೋತ್ಸವದ ನಂತರ ಅನ್ನಸಂತರ್ಪಣೆ ಹಾಗೂ ವಿವಿಧ ಸಂಘಟನೆಗಳ ಮೂಲಕ ಪಾನಕ ಮಜ್ಜಿಗೆ ವಿತರಣೆ  ಮಾಡಲಾಯಿತು.

ರಾತ್ರಿ 7 ಗಂಟೆಗೆ ವರ್ಣರಜಿಂತ ಬಾಣಬಿರುಸುಗಳ ಪ್ರದರ್ಶನದ ಜೊತೆಗೆ ಸ್ವಾಮಿಗೆ ಸೂರ್ಯಮಂಡಲೋತ್ಸವ ನಡೆಯಲಿದೆ.

Leave a Reply

Your email address will not be published. Required fields are marked *