ಸರ್ಕಾರವು ಪ್ರತಿ ವರ್ಷ ಅತಿಥಿ ಶಿಕ್ಷಕರ ನೇಮಕಕ್ಕೆ ಆದೇಶ ನೀಡಲಾಗುತ್ತಿದೆ. ಅತಿಥಿ ಶಿಕ್ಷಕರ ನೇಮಕಾತಿಯಲ್ಲಿನ ಪಾದರ್ಶಕತೆ ಜೊತೆಗೆ ವಿದ್ಯಾರ್ಹತೆ, ಅನುಭವವನ್ನು ಪರಿಗಣಿಸಿ, ಅರ್ಹ ಅತಿಥಿ ಶಿಕ್ಷಕರಿಗೆ ನ್ಯಾಯ ಒದಗಿಸಲು ತಾವೇ ಖುದ್ದಾಗಿ ಶಾಲೆಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಪೂರ್ಣವಾಗಿ ಪರಿಶೀಲಿಸಿ ಸರಕಾರಿ ನಿಯಮಗಳ ಪ್ರಕಾರ ಸರಕಾರದ ಅನುಮೋದನೆಗೆ ಕಳುಹಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಕುಮಾರ್ ಶೆಟ್ಟಿ ಬಣ) ಮುಖಂಡರು ಮನವಿ ಪತ್ರ ನೀಡಿದ್ದಾರೆ.
ಈ ವೇಳೆ ರಾಜಘಟ್ಟ ರವಿ, ಮಣಿ ರೋಜಿಪುರ, ಶಂಕರ್, ಗಂಗರಾಜ್ ಶಿರವಾರ, ಹಮೀದ್, ಮುರುಳಿ, ನವೀನ್ ಇದ್ದರು.