ಅತಿಥಿ ಶಿಕ್ಷಕರ ನೇಮಕಾತಿಗಾಗಿ ಅರ್ಜಿ ಆಹ್ವಾನ

2023-24ನೇ ಸಾಲಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳು ಮತ್ತು ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗೆ ಅರ್ಹ ಅತಿಥಿ ಶಿಕ್ಷಕರನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

2023-24ನೇ ಸಾಲಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳು ಮತ್ತು ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗೆ ಗೌರವಧನದ ಆಧಾರದ ಮೇಲೆ ಪಡೆಯಲು ಉದ್ದೇಶಿಸಿರುವುದರಿಂದ ಸ್ಥಳೀಯ ಅರ್ಹ ಅತಿಥಿ ಶಿಕ್ಷಕರು ತಮ್ಮ ಸ್ವವಿವರಗಳಿರುವ (biodata, resume) ಮನವಿಗಳನ್ನು ಅವಶ್ಯ ದಾಖಲೆಗಳೊಂದಿಗೆ ಈ ಕೆಳಕಂಡ ಕಚೇರಿಗೆ/ಶಾಲೆಗೆ ಸಲ್ಲಿಸುವುದು.

1.ಹೊಸಕೋಟೆ ತಾಲ್ಲೂಕಿನ ಗಿಡ್ಡಪ್ಪನಹಳ್ಳಿ ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ 6 ರಿಂದ 10ನೇ ತರಗತಿ ಸಿ.ಬಿ.ಎಸ್.ಇ ಪಠ್ಯಕ್ರಮಕ್ಕೆ :-ಬಿ.ಎಸ್.ಸಿ/ಬಿ.ಎಡ್ ವಿದ್ಯಾರ್ಹತೆ ಪಡೆದಿರುವ
ಗಣಿತ ಶಿಕ್ಷಕರು,

(11ನೇ ತರಗತಿ – ರಾಜ್ಯ ಪಠ್ಯಕ್ರಮ) (ಪಿ.ಸಿ.ಎಂ.ಬಿ)
ಕನ್ನಡ ಭಾಷಾ ಶಿಕ್ಷಕರು
ವಿದ್ಯಾರ್ಹತೆ:-ಎಂ.ಎ/ಬಿ.ಎಡ್,

ಜೀವಶಾಸ್ತ್ರ ಶಿಕ್ಷಕರು
ವಿದ್ಯಾರ್ಹತೆ:- ಎಂ.ಎಸ್.ಸಿ/ಬಿ.ಎಡ್ ಪದವಿ ಪಡೆದಿರುವವರು ಅರ್ಜಿ ಸಲ್ಲಿಸಬಹುದು.

2.ದೇವನಹಳ್ಳಿ ತಾಲ್ಲೂಕಿನ ದೇವನಾಯಕನಹಳ್ಳಿ,
ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ
(6 ರಿಂದ 10ನೇ ತರಗತಿ- ರಾಜ್ಯ ಪಠ್ಯಕ್ರಮ)
ವಿಜ್ಞಾನ ಶಿಕ್ಷಕರು
ವಿದ್ಯಾರ್ಹತೆ:- ಬಿ.ಎಸ್.ಸಿ/ಬಿ.ಎಡ್,

(11 ನೇ ತರಗತಿ – ರಾಜ್ಯ ಪಠ್ಯಕ್ರಮ) (ಪಿ.ಸಿ.ಎಂ.ಬಿ)
ವಿಜ್ಞಾನ ಶಿಕ್ಷಕರು
ಎಂ.ಎಸ್.ಸಿ/ಬಿ.ಎಡ್
ವಿದ್ಯಾರ್ಹತೆ:-(Physics & Mathematics)

ವಿಜ್ಞಾನ ಶಿಕ್ಷಕರು
ಎಂ.ಎಸ್.ಸಿ/ಬಿ.ಎಡ್
ವಿದ್ಯಾರ್ಹತೆ:-(Chemistry & Biology) ಪದವಿ ಪಡೆದಿರುವವರು ಅರ್ಜಿ ಸಲ್ಲಿಸಬಹುದು.

3.ಮೌಲಾನಾ ಆಜಾದ್ ಮಾದರಿ ಶಾಲೆ, ಮುತ್ತೂರು, ದೊಡ್ಡಬಳ್ಳಾಪುರ ತಾ||
ಆಂಗ್ಲ ಭಾಷಾ ಶಿಕ್ಷಕರು
ವಿದ್ಯಾರ್ಹತೆ:- ಬಿ.ಎ/ಬಿ.ಎಡ್ ಪದವಿ ಪಡೆದಿರುವವರು ಅರ್ಜಿ ಸಲ್ಲಿಸಬಹುದು.

4.ಮೌಲಾನಾ ಆಜಾದ್ ಮಾದರಿ ಶಾಲೆ, ಇಸ್ಲಾಂಪುರ, ನೆಲಮಂಗಲ ತಾ||
ಗಣಿತ ಶಿಕ್ಷಕರು
ವಿದ್ಯಾರ್ಹತೆ:- ಬಿ.ಎಸ್.ಸಿ/ಬಿ.ಎಡ್ ಪದವಿ ಪಡೆದಿರುವವರು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:25/08/2023, ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು
ಪ್ರಾಂಶುಪಾಲರು, ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ, ಗಿಡ್ಡಪ್ಪನಹಳ್ಳಿ, ಹೊಸಕೋಟೆ ದೂರವಾಣಿ ಸಂಖ್ಯೆ
9632933397,
8660971267,
8310397004,

ಪ್ರಾಂಶುಪಾಲರು, ಮೊರಾರ್ಜಿ ದೇಸಾಯಿ ವಸತಿ ಶಾಲೆ, ದೇವನಾಯಕನಹಳ್ಳಿ, ದೇವನಹಳ್ಳಿ ತಾ||
9742998287,
9900945262,

ಮುಖ್ಯೋಪಾಧ್ಯಾಯರು, ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆ, ಇಸ್ಲಾಂಪುರ ಗ್ರಾಮ, ನೆಲಮಂಗಲ ತಾಲ್ಲೂಕು.
8317403213,
8660197516

ಮುಖ್ಯೋಪಾಧ್ಯಾಯರು, ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆ, ಮುತ್ತೂರು, ದೊಡ್ಡಬಳ್ಳಾಪುರ ತಾಲ್ಲೂಕು.
9739706158,
9986874875,

ಜಿಲ್ಲಾ ಅಧಿಕಾರಿಗಳ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕೊಠಡಿ ಸಂಖ್ಯೆ:216, 2ನೇ ಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ಕುಂದಾಣ ಹೋ||, ದೇವನಹಳ್ಳಿ ತಾ||-562110, ಬೆಂಗಳೂರು ಗ್ರಾಮಾಂತರ ಜಿಲ್ಲೆ. ದೂರವಾಣಿ ಸಂಖ್ಯೆ 080-29787455 ಅನ್ನು ಸಂಪರ್ಕಿಸಬಹುದು.

Leave a Reply

Your email address will not be published. Required fields are marked *