ಅಣ್ಣ ತಂಗಿಯ ಲವ್ – ಅಕ್ರಮ ಸಂಬಂಧ….?- ತಂಗಿಯ ಸಾವಿನಲ್ಲಿ ಅಂತ್ಯ.!

ಚಿಕ್ಕಬಳ್ಳಾಪುರ- ಕಾಮದ ಮುಂದೆ ಈ ಕಾಲದಲ್ಲಿ ಸಂಬಂಧಕ್ಕೆ ಬೆಲೆನೆ ಇಲ್ಲವಾಗಿದೆ.. ಇಲ್ಲೊಂದು ಪ್ರೇಮದ ಕತೆಯೂ ಇದೆ ರೀತಿ ಇದೆ. ಅವರಿಬ್ಬರು ಪರಸ್ಪರ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳು. ಅವನಿಗೆ 30 ವರ್ಷ, ಆಕೆಗೆ 21 ವರ್ಷ ವಯಸ್ಸು. ಆದ್ರೂ ಅವರಿಬ್ಬರು ಅಣ್ಣ ತಂಗಿ ಅನ್ನೋ ಪವಿತ್ರ ಸಂಬಂಧಕ್ಕೆ ವಿರುದ್ದವಾಗಿ, ಪರಸ್ಪರ ಪ್ರೀತಿಸಿ ಅಕ್ರಮ ಸಂಬಂಧದಲ್ಲಿ ತೇಲಾಡ್ತಿದ್ರಂತೆ. ಇದನ್ನು ಕಂಡ, ಬಂಧು ಬಳಗ, ಗ್ರಾಮಸ್ಥರು ಬೈಯ್ದು ಬುದ್ದಿ ಹೇಳಿದ್ರಂತೆ.. ಕೇಳದೆ ಲಿವಿಂಗ್ ಇನ್ ರಿಲೇಷನ್ ಶಿಪ್ ನಲ್ಲಿ ಇದ್ರಂತೆ, ಆದ್ರೆ ಈಗ ಆಕೆ ಶವವಾಗಿ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಗ್ರಾಮದಲ್ಲಿ ನಡೆದಿದೆ.

ಅಂದಹಾಗೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ರಾಮಕೃಷ್ಣಪುರದ ನಿವಾಸಿ ರಾಮಲಕ್ಷ್ಮಿ ಮೃತ ಯುವತಿ. ರಾಮಕೃಷ್ಣಾಪುರದ ಈ ರಾಮಲಕ್ಷ್ಮಿ ಹಾಗೂ ಈಕೆಯ ಸಹೋದರ ಸಂಬಂಧಿ ದೊಡ್ಡಪ್ಪನ ಮಗನಾದ ಕೃಷ್ಣ ಇಬ್ಬರು ಪರಸ್ಪರ ಪ್ರೀತಿ ಪ್ರೇಮ ಅಂತ ಅಕ್ರಮ ಸಂಬಂಧ ಸಹ ಹೊಂದಿದ್ರಂತೆ, ಈ ವಿಚಾರ ಗೊತ್ತಾಗಿ ಎರಡು ಕುಟುಂಬಗಳ ಬಂಧು ಬಳಗ, ಇಬ್ಬರಿಗೂ ಬೈಯ್ದು ಬುದ್ದಿವಾದ ಹೇಳಿದ್ರು. ಕೊನೆಗೆ ರಾಮಕೃಷ್ಣಪುರದಲ್ಲಿ ಒಂದು ಕುಟುಂಬ. ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಒಂದು ಕುಟುಂಬವಾಗಿ ಪ್ರತ್ಯೇಕವಾಗಿ ನೆಲೆಸಿದ್ರು. ಮತ್ತೊಂದೆಡೆ ಕೃಷ್ಣನಿಗೆ ಬೇರೆ ಹುಡುಗಿಯೊಬ್ಬಳ ಜೊತೆ ಮದುವೆಯನ್ನು  ಸಹ ಮಾಡಿಸಿದ್ರಂತೆ, ಆದ್ರೂ ಕೃಷ್ಣ ತನ್ನ ತಂಗಿ ರಾಮಲಕ್ಷ್ಮಿ ಯನ್ನು ಬಿಡದೆ… ಅವಳ ತಲೆ ಕೆಡಿಸಿ ಪೇರೇಸಂದ್ರದಲ್ಲಿ ಪ್ರತ್ಯೇಕ ಮನೆ ಮಾಡಿ ಕಳ್ಳ ಸಂಸಾರ ಮಾಡ್ತಾ ಇದ್ನಂತೆ, ಈಗ ನೋಡಿದ್ರೆ… ರಾಮಲಕ್ಷ್ಮಿ ಪೇರೇಸಂದ್ರದ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಅವಳ ಸಾವಿಗೆ ಅಣ್ಣ ವರಸೆಯ ಕೃಷ್ಣನೆ ಕಾರಣ ಎಂದು ಮೃತಳ ಅಕ್ಕ‌ ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ತಂಗಿ ಸಾವಿನ ಮನೆ ಸೇರಿದ್ರೆ… ಅಣ್ಣ ಪೆರೇಸಂದ್ರ ಪೊಲೀಸರ ಭಯದಿಂದ ನಾಪತ್ತೆಯಾಗಿದ್ದು, ಈ ಸಂಬಂಧ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!