ಅಂತಾರಾಜ್ಯ ಅಡಿಕೆ ವ್ಯಾಪಾರಿ H.S. ಉಮೇಶ್ ಗೆ ಸೇರಿದ 1 ಕೋಟಿ ಹಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ಸಂತೋಷ್ ಸೇರಿ ಮೂವರ ಬಂಧನ ಮಾಡಲಾಗಿದೆ.
ಅಕ್ಟೋಬರ್ 7 ರಂದು ವಿವಿಧ ಜಿಲ್ಲೆಗಳ ಅಡಿಕೆ ಖರೀದಿಗೆ ಚಿತ್ರದುರ್ಗದಿಂದ ಶಿರಾ, ತುಮಕೂರು ಮಾರ್ಗವಾಗಿ ಬೆಂಗಳೂರಿನ ಗಾಂಧೀನಗರಕ್ಕೆ ಬಂದು ಊಟಕ್ಕೆಂದು ಕಾರು ನಿಲ್ಲಿಸಿ ಹೋಟೆಲ್ ಗೆ ಹೋದಾಗ ಕಾರಿನ ಡಿಕ್ಕಿಯಲ್ಲಿದ್ದ ಒಂದು ಕೋಟಿ ನಗದನ್ನ ಎಸ್ಕೇಪ್ ಮಾಡಿದ್ದ ಕಳ್ಳರು.
ಹೋಟೆಲ್ ನಲ್ಲಿ ಊಟ ಮಾಡಿ ಚಂದ್ರಾಲೇಔಟ್, ದಾಬಸ್ ಪೇಟೆ ಬಳಿ ಕಾರು ನಿಲ್ಲಿಸಿದ್ದರು. ಅ.7ರ ಸಂಜೆ 7:45 ರ ವೇಳೆಗೆ ಚಿತ್ರದುರ್ಗದ ಭೀಮಸಮುದ್ರದ ಅಂಗಡಿಗೆ ತೆರಳಿ ಕಾರಿನ ಡಿಕ್ಕಿ ಪರಿಶೀಲಿಸಿದಾಗ ಕಳವು ಬೆಳಕಿಗೆ ಬಂದಿತ್ತು.
ಘಟನೆ ಸಂಬಂಧ ಉಪ್ಪಾರಪೇಟೆ ಪೊಲೀಸರಿಗೆ ದೂರು ನೀಡಿದ್ದ ಅಡಿಕೆ ವ್ಯಾಪಾರಿ H.S. ಉಮೇಶ್, ದೂರು ಹಿನ್ನೆಲೆ ಉಪ್ಪಾರಪೇಟೆ ಠಾಣೆಯಲ್ಲಿ FIR ದಾಖಲಾಗಿತ್ತು. ಪ್ರಕರಣ ಸಂಬಂಧ ಆರೋಪಿಗಳ ಜಾಡು ಪತ್ತೆಹಚ್ಚಿ ಬಂಧಿಸಿ ವಿಚಾರಣೆ ಮುಂದುವರಿಸಿರುವ ಉಪ್ಪಾರಪೇಟೆ ಪೊಲೀಸರು.