
ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ವಾಣಿಗರಹಳ್ಳಿ ಅಡಿಕೆ ತೋಟದಲ್ಲಿ ಬೃಹತ್ ಹೆಬ್ಬಾವು ಕಂಡುಬಂದಿದೆ….

ರೈತರು ಅಡಿಕೆ ತೋಟದಲ್ಲಿ ಅಡಿಕೆ ಕೀಳಲು ಚಿಕ್ಕಹೆಜ್ಜಾಜಿ ಗ್ರಾಮದ ಕೋಳಿ ಅಂಗಡಿ ಅಪ್ಪಿ ಅವರು ಹೋದಾಗ, ಬೃಹತ್ ಹೆಬ್ಬಾವು ಕಾಣಿಸಿದ್ದು, ಕೂಡಲೇ ದೊಡ್ಡಬಳ್ಳಾಪುರದ ಉರುಗ ರಕ್ಷಕ ರಾಮಾಂಜಿನಪ್ಪನವರಿಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕೆ ಉರುಗ ರಕ್ಷಕ ಸ್ಥಳಕ್ಕೆ ಧಾವಿಸಿ ಸುರಕ್ಷಿತವಾಗಿ ಹೆಬ್ಬಾವನ್ನು ರಕ್ಷಣೆ ಮಾಡಿದ್ದಾರೆ….

ರಕ್ಷಣೆ ಮಾಡಿದ ಹೆಬ್ಬಾವನ್ನು ಕಾಡಿಗೆ ಬಿಡಲಾಗಿದೆ. ಸದ್ಯ ಹೆಬ್ಬಾವಿನಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.