ಒಂಟಿ ವೃದ್ಧೆಯನ್ನು ಟಾರ್ಗೆಟ್ ಮಾಡಿಕೊಂಡ ಕಳ್ಳರು, ಅಜ್ಜಿ ಬಳಿ ಇದ್ದ ಒಡವೆ ಕದ್ದು ಪರಾರಿಯಾಗಿರುವ ಘಟನೆ ಇಂದು ಮಧ್ಯಾಹ್ನ ತಾಲೂಕಿನ ಕಂಟನಕುಂಟೆ ಹೊರವಲಯದಲ್ಲಿ ನಡೆದಿದೆ..
ಕಂಟನಕುಂಟೆ ಗ್ರಾಮದಿಂದ ಸುಮಾರು ಒಂದು ಕಿಲೋ ಮೀಟರ್ ದೂರದಲ್ಲಿರುವ ಹಿಂದೂಪುರ-ಯಲಹಂಕ ಹೆದ್ದಾರಿ ಪಕ್ಕದ ಜಮೀನಿನಲ್ಲಿ ವಡ್ಡರಹಳ್ಳಿ ಗ್ರಾಮದ ನಿವಾಸಿ ಚಂದ್ರಮ್ಮ (75), ಒಂಬ್ಬೊಂಟಿಯಾಗಿ ತನ್ನ ಪಾಡಿಗೆ ತಾನು ಹಸುಗಳನ್ನು ಮೇಯಿಸುತ್ತಿದ್ದರು.
ಇದನ್ನೇ ಬಂಡವಾಳ ಮಾಡಿಕೊಂಡು ಬೈಕ್ ನಲ್ಲಿ ಬಂದ ಮಹಿಳೆ ಹಾಗೂ ಒಬ್ಬ ಯುವಕ, ಹೆದ್ದಾರಿ ಪಕ್ಕದಲ್ಲಿ ಬೈಕ್ ನಿಲ್ಲಿಸಿ ವೃದ್ಧೆ ಬಳಿ ಬಂದು ಕೆಲಕಾಲ ಅಜ್ಜಿ ಜೊತೆ ಮಾತುಕತೆಗಿಳಿದು ಯಾಮಾರಿಸಿ, ಗಟ್ಟಿಯಾಗಿ ಹಿಡಿದುಕೊಂಡು ಮೈಮೇಲೆ ಇದ್ದ ಒಡವೆಗಳನ್ನು ಕದ್ದು ಬೈಕ್ ನಲ್ಲಿ ಪರಾರಿಯಾಗಿದ್ದಾರೆ ಎಂದು ವೃದ್ಧೆ ಚಂದ್ರಮ್ಮ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ…