ತಾಲೂಕಿನ ಅರೇಹಳ್ಳಿ- ಗುಡ್ಡದಹಳ್ಳಿ ಬಳಿ ಇರುವ ಅಪೇರಲ್ ಪಾರ್ಕ್ ಹಾಗೂ ಅಜಾಕ್ಸ್ ಕಂಪನಿ ಮುಂಭಾಗ ಚಿರತೆಯೊಂದು ಓಡಾಡುವ ದೃಶ್ಯ ಕಂಡುಬಂದಿದೆ.
ಇತ್ತೀಚೆಗೆ ವೀರಾಪುರ ಗ್ರಾಮದಲ್ಲೂ ಸಹ ಚಿರತೆ ಕಾಣಿಸಿಕೊಂಡಿತ್ತು. ಈ ಎರಡು ಕಡೆಯಲ್ಲಿ ಚಿರತೆ ಓಡಾಡುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ನೂರಾರು ಕಾರ್ಖಾನೆಗಳಿಗೆ ಕೆಲಸಕ್ಕೆಂದು ಸ್ಥಳೀಯರು ಸೇರಿದಂತೆ ದೂರದ ಊರುಗಳಿಂದ ಸಾವಿರಾರು ಮಂದಿ ಕಾರ್ಮಿಕರು ಬರುತ್ತಾರೆ. ಇದೀಗ ಚಿರತೆ ಉಪಟಳದಿಂದ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಒಬ್ಬೊಂಟಿಯಾಗಿ ಓಡಾಡಲು ಭಯಭೀತರಾಗಿದ್ದಾರೆ.
ಸದ್ಯ ಚಿರತೆ ಪ್ರತ್ಯಕ್ಷದ ಮಾಹಿತಿ ತಿಳಿದ ಜನ ಆತಂಕದಲ್ಲಿದ್ದಾರೆ. ಅರಣ್ಯ ಇಲಾಖೆ ಕೂಡಲೇ ಚಿರತೆಯನ್ನ ಸೆರೆ ಹಿಡಿಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.