ರಾಮನಗರ: ಸಾಮಾನ್ಯವಾಗಿ ಕೋಳಿಗೆ ಎರಡು ಕಾಲು ಇರುತ್ತದೆ ಆದರೆ ಇಲ್ಲೊಂದು ನಾಲ್ಕು ಕಾಲಿನ ವಿಲಕ್ಷಣ ಕೋಳಿ ಮರಿಯೊಂದು ಮೊಟ್ಟೆಯಿಂದ ಹೊರ ಬಂದಿದ್ದು, ಗ್ರಾಮಸ್ಥರ ಅಚ್ಚರಿಗೆ ಕಾರಣವಾಗಿದೆ.
ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಮರಳವಾಡಿ ಹೋಬಳಿಯ ಮಲ್ಲೇನಹಳ್ಳಿ ಗ್ರಾಮದ ಮುನಿರಾಜು ಎಂಬುವರ ಮನೆಯಲ್ಲಿ ನಾಲ್ಕು ಕಾಲು ಇರುವ ಕೋಳಿ ಮರಿ ಜನನ ವಾಗಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಮಲ್ಲೇನಹಳ್ಳಿ ಮುನಿರಾಜು ರೈತರಾಗಿದ್ದು ಉಪಕಸುಬಾಗಿ ಕೋಳಿ ಸಾಕಾಣಿಕೆಯನ್ನು ಮಾಡುತ್ತಿದ್ದಾರೆ. ಇತ್ತೀಚಿಗೆ ಕೋಳಿ ಒಂದು ಇಟ್ಟಿದ್ದ 15ಕ್ಕೂ ಹೆಚ್ಚು ಮೊಟ್ಟೆಗಳಿಗೆ ಮರಿ ಮಾಡಲು ಕಳೆದ 20 ದಿನಗಳಿಂದ ಕಾವು ಕೊಟ್ಟಿತ್ತು.
ಶುಕ್ರವಾರ ಮೊಟ್ಟೆಗಳು ಒಡೆದು ಮರಿಗಳು ಜನನವಾಗಿತ್ತು. ಅದರಲ್ಲಿ ನಾಲ್ಕು ಕಾಲುವುಳ್ಳ ಕೋಳಿ ಮರಿ ಜನನ ವಾಗಿರುವುದನ್ನು ಕಂಡು ಮುನಿರಾಜು ಅಚ್ಚರಿಗೊಂಡಿದ್ದರು.
ವಿಷಯ ತಿಳಿಯುತ್ತಿದ್ದಂತೆ ಅಕ್ಕ ಪಕ್ಕದ ಗ್ರಾಮಸ್ಥರು ಮುಗಿಬಿದ್ದು ಕೋಳಿಮರಿಯನ್ನು ವೀಕ್ಷಣೆ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಕೋಳಿ ಇರುವ ಎರಡು ಕಾಲುಗಳ ಪಕ್ಕದಲ್ಲಿ ಮತ್ತೆರಡು ಚಿಕ್ಕ ಕಾಲುಗಳು ಹುಟ್ಟಿವೆ ಇದೊಂದು ಅಪರೂಪದ ಕೋಳಿಮರಿ ನಾಲ್ಕು ಕಾಲುಗಳಲ್ಲಿ ಚಲನವಲನ ಸಾರ್ವಜನಿಕರು ಕುತೂಹಲದಿಂದ ಮೂಡಿಸಿದೆ.