ಒಂದೇ ತಲೆಯಲ್ಲಿ ಎರಡು ಮುಖವುಳ್ಳ ಕರು ಜನನವಾಗಿರುವ ಘಟನೆ ತಾಲೂಕಿನ ಸಾಸಲು ಹೋಬಳಿಯ ಕಾಡಕುಂಟೆ ಗ್ರಾಮದಲ್ಲಿಂದು ನಡೆದಿದೆ.
ಹಸುವೊಂದು ಗಂಡು ಕರುವಿಗೆ ಇಂದು ಜನ್ಮ ನೀಡಿದೆ. ಸಾಮಾನ್ಯವಾಗಿ ಎಲ್ಲಾ ಹಸುಗಳು ಒಂದೇ ತಲೆ ಇರುವ ಕರುಗಳಿಗೆ ಜನ್ಮ ನೀಡುತ್ತವೆ. ಆದರೆ, ಕಾಡಕುಂಟೆ ಗ್ರಾಮದಲ್ಲಿ ಹಸುವೊಂದು ಒಂದೇ ತಲೆಯಲ್ಲಿ ಎರಡು ಮುಖವುಳ್ಳ ಗಂಡುಕರುವಿಗೆ ಜನ್ಮ ನೀಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಈ ಕರುವಿನ ಮುಖದಲ್ಲಿ ಎರಡು ಮುಖ, ನಾಲ್ಕು ಕಣ್ಣು, ಎರಡು ಕಿವಿ ಇದೆ. ಈ ವಿಚಿತ್ರವಾದ ಕರುವನ್ನು ನೋಡಲು ಊರಿನ ಗ್ರಾಮಸ್ಥರು ಜಮಾಯಿಸಿದ್ದಾರೆ.