ನಗರದ ರಾಜಶ್ರೀ ಕಂಫರ್ಟ್ಸ್ ಸಮೀಪದ ರಸ್ತೆ ಬದಿಯ ಬೆಡ್ ಶೀಟ್ ಅಂಗಡಿ, ಟೀ ಅಂಗಡಿಯಲ್ಲಿ ಅಗ್ನಿ ಅವಘಡ ಆಗಿದ್ದು, ಸದ್ಯ ಬೆಂಕಿನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದೆ.
ಯಾವ ಕಾರಣಕ್ಕೆ ಬೆಂಕಿ ಸ್ಪೋಟಗೊಂಡಿತು ಎಂಬ ನಿಖರ ಕಾರಣ ಇನ್ನೂ ತಿಳಿದುಬಂದಿರುವುದಿಲ್ಲ. ಮೇಲ್ನೋಟಕ್ಕೆ ಪಕ್ಕದಲ್ಲೇ ಇದ್ದ ಟೀ ಅಂಗಡಿಯಲ್ಲಿದ್ದ ಎರಡು ಸಿಲಿಂಡರ್ ಸ್ಫೋಟಗೊಂಡಿರಬಹುದು ಎಂದು ಸ್ಥಳೀಯರು ತಿಳಿಸಿದ್ದರು.
ಬೆಂಕಿಯ ಕೆನ್ನಾಲಿಗೆಗೆ ಬೆಡ್ ಶೀಟ್ ಅಂಗಡಿ ಸಂಪೂರ್ಣ ಸುಟ್ಟು ಕರಕಲಾಗಿದೆ. ವ್ಯಾಪಾರಿಗಳು ಬಾಡಿಗೆ ಶೆಡ್ ಹಾಕಿಕೊಂಡು ಬೆಡ್ ಶೀಟ್ ವ್ಯಾಪಾರ ಮಾಡುತ್ತಿದ್ದರು. ಆಕಸ್ಮಿಕ ಬೆಂಕಿಯಿಂದ ಸಂಪೂರ್ಣ ಬೆಡ್ ಶೀಟ್ಗಳು ಬೆಂಕಿಗಾಹುತಿಯಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ತ್ವರಿತ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.