ಕರ್ನಾಟಕ ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023ರ ಸಂಬಂಧ ಚುನಾವಣಾ ಆಯೋಗದ ನಿರ್ದೇಶನದಂತೆ ಅಗತ್ಯ ಸೇವೆಗಳಲ್ಲಿ ಚುನಾವಣಾ ದಿನದಂದು ಕಾರ್ಯ ನಿರ್ವಹಿಸುತ್ತಿರುವ ಗೈರು ಹಾಜರಿ ಮತದಾರರಿಗೆ ಮೇ 02, ಮೇ 03 ಹಾಗೂ ಮೇ 04 ರಂದು ನಡೆದ ಅಂಚೆ ಮತದಾನದಲ್ಲಿ ಶೇಕಡಾ 100 ರಷ್ಟು ಅಂಚೆ ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್.ಲತಾ ಅವರು ತಿಳಿಸಿದ್ದಾರೆ.
ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮೇ 02 ರಂದು 36 ಮಂದಿ ಗೈರು ಹಾಜರಿ ಮತದಾರರು, ಮೇ 03 ರಂದು 10 ಮಂದಿ ಗೈರು ಹಾಜರಿ ಮತದಾರರು ಒಟ್ಟಾರೆ 46(ಶೇ. 100) ಮಂದಿ ಗೈರು ಹಾಜರಿ ಮತದಾರರು ಅಂಚೆ ಮತದಾನ ಮಾಡಿದ್ದಾರೆ.
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮೇ 02 ರಂದು 14 ಮಂದಿ ಗೈರು ಹಾಜರಿ ಮತದಾರರು, ಮೇ 03 ರಂದು 05 ಮಂದಿ ಗೈರು ಹಾಜರಿ ಮತದಾರರು ಒಟ್ಟಾರೆ 19(ಶೇ. 100) ಮಂದಿ ಗೈರು ಹಾಜರಿ ಮತದಾರರು ಅಂಚೆ ಮತದಾನ ಮಾಡಿದ್ದಾರೆ.
ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಮೇ 02 ರಂದು 07 ಮಂದಿ ಗೈರು ಹಾಜರಿ ಮತದಾರರು, ಮೇ 03 ರಂದು ಒಬ್ಬರು ಗೈರು ಹಾಜರಿ ಮತದಾರರು ಹಾಗೂ ಮೇ 04 ರಂದು ಒಬ್ಬರು ಗೈರು ಹಾಜರಿ ಮತದಾರರು ಒಟ್ಟಾರೆ 09(ಶೇ. 100) ಮಂದಿ ಗೈರು ಹಾಜರಿ ಮತದಾರರು ಅಂಚೆ ಮತದಾನ ಮಾಡಿದ್ದಾರೆ.
ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಗೈರು ಹಾಜರಿ ಮತದಾರರು ಇಲ್ಲದ ಕಾರಣ ಅಂಚೆ ಮತದಾನ ನಡೆದಿರುವುದಿಲ್ಲ.
ಅಗತ್ಯ ಸೇವೆಗಳಲ್ಲಿ ಚುನಾವಣಾ ದಿನದಂದು ಕಾರ್ಯ ನಿರ್ವಹಿಸುತ್ತಿರುವ ಒಟ್ಟು 74 ಗೈರು ಹಾಜರಿ ಮತದಾರರಲ್ಲಿ 74 ಮಂದಿಯೂ ಅಂಚೆ ಮತದಾನ ಮಾಡುವ ಮೂಲಕ ಶೇಕಡ 100 ರಷ್ಟು ಅಂಚೆ ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅವರು ತಿಳಿಸಿದ್ದಾರೆ.