
ಕೋಲಾರ: ನಗರದ ಎಸ್ಸೆನ್ನಾರ್ ಆಸ್ಪತ್ರೆ ಮುಂಭಾಗ ಅಖಂಡ ಭಾರತ ವಿನಾಯಕ ಮಹಾಸಭಾ ವತಿಯಿಂದ ಶಾಶ್ವತ ಮತ್ತು ಶುದ್ಧ ನೀರಿಗಾಗಿ ಆಗ್ರಹಿಸಿ 11ನೇ ವರ್ಷದ ಅದ್ದೂರಿ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ನಗರದಲ್ಲಿರುವ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಓಂಶಕ್ತಿ ಚಲಪತಿ ಅವರ ಕಛೇರಿಯಲ್ಲಿ ಸಭೆ ಸೇರಿ ತೀರ್ಮಾನಿಸಿದ ಸಮಿತಿ ಮುಖಂಡರು ಪ್ರತಿ ವರ್ಷದಂತೆ ಈ ಬಾರಿಯೂ 9 ದಿನಗಳ ಕಾಲ ಅದ್ದೂರಿಯಾಗಿ ಆಚರಣೆ ನಡೆಸಬೇಕು ಇದಕ್ಕೆ ಮಹಾಸಭಾದ ಸದಸ್ಯರ ಸಹಕಾರ ಮುಖ್ಯವಾಗಿದೆ ಕಾರ್ಯಕ್ರಮವನ್ನು ಹೇಗೆ ಆಚರಣೆ ಮಾಡಬೇಕು ಎಂಬುದರ ಕುರಿತು ರೂಪರೇಷೆಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯ ನಂತರ ಸಮಿತಿಯ ಮುಖಂಡ ಓಂಶಕ್ತಿ ಚಲಪತಿ ಮಾಹಿತಿ ನೀಡಿ ಅಖಂಡ ಭಾರತ ವಿನಾಯಕ ಮಹಾಸಭಾ ವತಿಯಿಂದ ಗಣೇಶೋತ್ಸವದಲ್ಲಿ ವಿವಿಧ ಕಾರ್ಯಕ್ರಮವನ್ನು ಪ್ರತಿ ವರ್ಷದಂತೆ ಈ ಬಾರಿಯೂ ಆಚರಣೆಗೆ ಸಮಿತಿ ತೀರ್ಮಾನಿಸಲಾಗಿದೆ 9 ದಿನಗಳ ಕಾಲ ನಡೆಯುವ ಗಣೇಶೋತ್ಸವದಲ್ಲಿ ಪ್ರಖ್ಯಾತ ಚಲನಚಿತ್ರ ನಟ ನಟಿಯರಿಂದ ಸಾಂಸ್ಕೃತಿಕ, ಸಂಗೀತೋತ್ಸವ, ನಗೆ ಹಬ್ಬದಂತಹ ಕಾರ್ಯಕ್ರಮಗಳು ಸೇರಿದಂತೆ ಕ್ರೀಡೆಯನ್ನು ಉತ್ತೇಜಿಸುವ ಸಲುವಾಗಿ ಕ್ರೀಡಾ ಚಟುವಟಿಕೆಗಳು ರಂಗೋಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗುತ್ತದೆ ಕೊನೆಯ ದಿನ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಸೇರಿದಂತೆ ರಾಜ್ಯದಿಂದ ಜಾನಪದ ಕಲಾವಿದರಿಂದ ಚಂಡಿವಾಧ್ಯ, ತಮಟೆ, ನೃತ್ಯ ಕೀಲುಕುದುರೆಯೊಂದಿಗೆ ಅದ್ದೂರಿ ಮೆರವಣೆಗೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.
ಸಭೆಯಲ್ಲಿ ಅಖಂಡ ಭಾರತ ವಿನಾಯಕ ಮಹಾಸಭಾ ಮುಖಂಡರಾದ ಸಾ.ಮಾ ಅನಿಲ್ ಬಾಬು, ನಾಮಲ್ ಮಂಜು, ಬಾಬು, ನಾಗ, ಎಬಿವಿಪಿ ಹರೀಷ್, ಸಂದೀಪ್, ಅಪ್ಪಿನಾರಾಯಣಸ್ವಾಮಿ, ಗಂಗಮ್ಮನಪಾಳ್ಯ ಚಂದ್ರನ್ ನವೀನ್, ಶಶಿಕುಮಾರ್, ಆಚಾರಿ ಕೇಶವ, ರವಿಕುಮಾರ್, ವಿನಯ್ ಮುಂತಾದವರು ಇದ್ದರು.