ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ದುರ್ಗೆನಹಳ್ಳಿ ಬಳಿ ಇರುವ ನಂದಿ ಹಿಲ್ ವ್ಯೂ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ದಾಖಲಾದ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು.
ಕಾರ್ಯಕ್ರಮದಲ್ಲಿ ಗಣಪತಿ ಹೋಮ, ಶಾರದ ಪೂಜೆ ನಡೆಸಿ ಸಾಂಪ್ರದಾಯದಂತೆ ಮಕ್ಕಳಿಗೆ ಪೋಷಕರಿಂದ ಅಕ್ಷರಭ್ಯಾಸ ಮಾಡಿಸಲಾಯಿತು.
ಈ ವೇಳೆ ಶಾಲೆಯ ಕಾರ್ಯದರ್ಶಿ ಧನಂಜಯ ಮಾತನಾಡಿ, ಸಮಾಜದಲ್ಲಿ ಅಕ್ಷರಾಭ್ಯಾಸ ಕೆಲವೇ ವರ್ಗಗಳಿಗೆ ಸೀಮಿತವಾಗಿದ್ದು, ಶೃಂಗೇರಿ ಮಠ, ವಾರಣಾಸಿ, ವೈಷ್ಣೋದೇವಿ ದೇವಾಲಯಗಳಲ್ಲಿ ಮಾತ್ರ ಅಕ್ಷರಾಭ್ಯಾಸ ಮಾಡಲಾಗುತ್ತಿತ್ತು, ಕೆಲ ಪೋಷಕರು ಅಲ್ಲಿಗೆ ಹೋಗಿ ಅಕ್ಷರಾಭ್ಯಾಸ ಮಾಡಿಸುವುದು ಕಷ್ಟವಾಗಿತ್ತು, ಇದನ್ನು ಮನಗೊಂಡ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಅವರು ಸಾಂಪ್ರದಾಯಬದ್ಧವಾಗಿ ಅಕ್ಷರಾಭ್ಯಾಸ ಮಾಡಿಸಲಾಗಿದೆ. ಇದಕ್ಕೆ ಪೋಷಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ನಂತರ ಶಾಲೆಯ ಅಧ್ಯಕ್ಷ ವರಲಕ್ಷಿ ಮಾತನಾಡಿ, ಶಾಲಾ ಹಂತದಲ್ಲಿ ಸಂಸ್ಕಾರ, ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳು ರೂಢಿಸಿಕೊಳ್ಳುವುದು ಕೂಡ ಅಕ್ಷರಾಭ್ಯಾಸದ ಮೂಲ ಉದ್ದೇಶವಾಗಿದೆ. ಶಾಲೆಯಲ್ಲಿ ಗುರುಗಳ ಪಾಠ ಪ್ರವನಚನಗಳಿಂದ ಮಕ್ಕಳ ಅಭ್ಯುದಯವಾಗಲಿ ಎಂದು ಆಶಿಸಿದರು,
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಭಾವನಾ, ಬಾಬು, ಶಿಕ್ಷಕ ವೃಂದದವರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.