ಅಕ್ರಮ ಸಂಬಂಧಕ್ಕೆ ಬಲಿಯಾಯ್ತಾ ಒಂದು ತುಂಬು ಜೀವ..!? ನಮ್ಮ ಅತ್ತಿಗೆಗೆ ಕಾಲ್ ಮಾಡ್ತೀಯಾ ಎಂದು ತಲೆಗೆ ರಾಡ್ ನಲ್ಲಿ ಹೊಡೆದ ಮೈದುನಾ..

ಆಕೆಗೆ ಅಪರಿಚಿತನೊಬ್ಬ ಚಿರಪರಿಚಿತನಾದ… ಪರಿಚಯ ಹಣಕಾಸಿನ ವ್ಯವಹಾರದವರೆಗೂ ಸಾಗಿತು. ಸ್ನೇಹದಲ್ಲೇ ಇದ್ದ ಇಬ್ಬರ ಪರಿಚಯ ಮತ್ತೊಂದು ಘಟ್ಟದವರೆಗೆ ಸಾಗಿತು. ಆಕೆಯ ಮನೆ ಬಾಗಿಲಿಗೆ ಬಂದು ರಾದ್ದಾಂತ ಮಾಡಿದ್ದೇ ತಡ.. ಘೋರ ಕೃತ್ಯ ನಡೆದು ಹೋಗಿದೆ.

ಬರ್ಬರವಾಗಿ ಹೆಣವಾಗಿ ಬಿದ್ದಿರುವ ಯುವಕನ ಹೆಸರು ಆಂಜಿನಪ್ಪ@ಆಂಜಿರೆಡ್ಡಿ. ಚಿಕ್ಕಬಳ್ಳಾಪುರ ನಗರದ ಇಂದಿರಾನಗರದ ಆಶಾ ಎಂಬುವರ ಮನೆಗೆ ಬಂದು ರಾದ್ದಾಂತ ಮಾಡಿದ ಎಂಬ ಕಾರಣಕ್ಕೆ ಕೊಲೆಯಾಗಿ ಹೋಗಿದ್ದಾನೆ.

ಇನ್ನೂ ಕೊಲೆಯಾದ ಆಂಜಿನಪ್ಪ ಪೆಯಿಂಟ್ ಕೆಲಸ ಮಾಡಿಕೊಂಡು ತಂದೆ ತಾಯಿ ಜೊತೆಗೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದ. ಆಂಜಿನಪ್ಪ, ಶಿಡ್ಲಘಟ್ಟ ತಾಲೂಕಿನ ನೆಂಟರ ಮನೆಗೆ ಹೋದಾಗ ಚಿಕ್ಕಬಳ್ಳಾಪುರ ನಗರದ ಆಶಾ ಪರಿಚಯವಾಗಿ ಪರಿಚಯ ಸ್ನೇಹಕ್ಕೆ ತಿರುಗಿ ಹಣದ ವ್ಯವಹಾರದವರೆಗೂ ಸಾಗಿದೆ. ಬಳಿಕ ಲವ್.. ಪವ್ ಅಂತ ಆಶಾಗೆ ಪೀಡಿಸಿದ್ನಂತೆ. ಇವರಿಬ್ಬರಿಗೆ ಅಕ್ರಮ ಸಂಬಂಧ ಕೂಡ ಇತ್ತು ಎನ್ನಲಾಗುತ್ತಿದೆ. ಮೂರು ದಿನಗಳ ಹಿಂದೆ ಅಂದರೆ ಫೆ. 21 ರಂದು ಸಂಜೆ 5:30ಕ್ಕೆ ಮನೆ ಒಳಗೆ ಆಂಜನಪ್ಪ ಬಂದು ಆಶಾ ಮೇಲೆ ಬಲತ್ಕಾರ ಮಾಡಲು ಪ್ರಯತ್ನ ಪಟ್ಟ ಎಂದು ಆರೋಪಿಸಲಾಗಿದೆ. ಆಂಜಿನಪ್ಪನನ್ನ ರೂಂ ನಲ್ಲಿ ಕೂಡಿ ಹಾಕಿ, ಆಶಾ ರೂಂ ನಿಂದ ತಪ್ಪಿಸಿಕೊಂಡು ಕೆಳಗೆ ಬಂದು ಪಕ್ಕದ ಮನೆಯವರ ಫೋನ್ ನಿಂದ ಮೊದಲು ಗಂಡನಿಗೆ ಕರೆ ಮಾಡಿದ್ದಾಳೆ, ಆಗ ಕಾಲ್ ತೆಗೆಯದೆ ಇದ್ದದ್ದಕ್ಕೆ ಮೈದುನ ರಾಘವೇಂದ್ರಗೆ ಕರೆ ಮಾಡಿದ್ದಾಳೆ. ತಕ್ಷಣವೇ ಮನೆಗೆ ಬಂದಾಗ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಇದು ಅತಿರೇಕಕ್ಕೆ ತಿರುಗಿ ಬುಧವಾರ ಆಶಾ ಮನೆಗೆ ಬಂದ ಆಂಜಿನಪ್ಪ ಬಲತ್ಕಾರ ಮಾಡಿದ್ದನೆಂಬ ಕಾರಣಕ್ಕೆ ರಾಘವೇಂದ್ರ@ರಘು ಬೆಡ್ ರೂಂನಲ್ಲಿದ್ದ ಅಂಜಿನಪ್ಪಗೆ ಮಾರಕಾಸ್ತ್ರದಿಂದ ಬಲವಾಗಿ ಹೊಡೆದ ಪರಿಣಾಮ ಆಂಜಿನಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೃತ್ಯ ಎಸೆಗಿದಂತೆ ಆಶಾ ಮತ್ತಿತರು ಹೇಳಿದರೂ ಕೇಳದ ರಘು ಕೊಲೆ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ…

ಗಂಡ ಅಮಾಯಕನಾಗಿದ್ದರಿಂದ ಆಶಾ ಮೈದುನ ರಾಘವೇಂದ್ರನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳಂತೆ. ಈ ಕಾರಣಕ್ಕೆ ಆಂಜಿನಪ್ಪ ಅತ್ತಿಗೆಯನ್ನ ಪೀಡಿಸುತ್ತಿದ್ದಾನಂತಾ.. ಪಿತ್ತ ನೆತ್ತಿಗೆರಿಸಿಕೊಂಡು ಕೊಲೆ ಮಾಡಿ ಜೈಲು ಸೇರಿದ್ದಾನೆ. ಇನ್ನೂ ಆಶಾ ಹಾಗೂ ಆಂಜಿನಪ್ಪ ನಡುವೆ ಹಣದ ವ್ಯವಹಾರದ ಜೊತೆಗೆ ಅಕ್ರಮ ಸಂಬಂಧವೂ ಇತ್ತು ಎಂಬ ಶಂಕೆ ಕೂಡ ಇದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಯುವಕ ಕೊಲೆಯಾಗಿದೆ ಎಂದು ಹೇಳಲಾಗ್ತಿದೆ…

ಒಟ್ಟಿನಲ್ಲಿ ಪ್ರೀತಿ, ಪ್ರೇಮ, ಮೋಹದ ಬಲೆಗೆ ಸಿಕ್ಕ ದುರಂತವೋ ಏನೋ ವೈಯಕ್ತಿಕ ಕೊಲೆಯಲ್ಲಿ ಅಂತ್ಯವಾಗಿದೆ. ಇತ್ತ ಹೆಂಡತಿ ಹಾಗೂ ತಮ್ಮನ ವಿಚಾರ ತಿಳಿದು ಆಶಾಳ ಗಂಡ ಧರ್ಮ ಸಂಕಟಕ್ಕೆ ಸಿಲುಕಿದ್ದಾನೆ.

Leave a Reply

Your email address will not be published. Required fields are marked *