
ಕೋಲಾರ: ಯೂರಿಯಾ ಅಕ್ರಮ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿ ಮಾಡಿ ದುಬಾರಿ ಬೆಲೆಗೆ ಮಾರಾಟ ಮಾಡುವ ರಸಗೊಬ್ಬರ ಅಂಗಡಿ ಮಾಲೀಕರ ವಿರುದ್ದ ಕ್ರಮ ಕೈಗೊಂಡು ರೈತರಿಗೆ ಅವಶ್ಯಕತೆ ಇರುವ ಯೂರಿಯಾವನ್ನು ಟಿಎಪಿಸಿಎಂಎಸ್ ವತಿಯಿಂದ ವಿತರಣೆ ಮಾಡಬೇಕೆಂದು ರೈತ ಸಂಘದಿಂದ ಯೂರಿಯಾ ಸಮೇತ ಸಹಾಯಕ ಕೃಷಿ ನಿರ್ದೇಶಕ ಮಹೇಶ್ ರವರಿಗೆ ಮನವಿ ನೀಡಿ, ಒತ್ತಾಯಿಸಲಾಯಿತು.
ರಸಗೊಬ್ಬರ ಮಾರಾಟಗಾರರು ಗೊಬ್ಬರ ಉತ್ಪಾದನಾ ಕಂಪನಿಗಳ ನಿಯಮಗಳನ್ನು ಪಾಲನೆ ಮಾಡುವಂತೆ ರೈತರಿಗೆ ಅವಶ್ಯಕತೆ ಇರುವ ಯೂರಿಯಾ ಬೇಕಾದರೆ ಅದಕ್ಕೆ ಸಂಬಂಧಪಟ್ಟ ಕಂಪನಿ ಬೇರೆ ಗೊಬ್ಬರ ಖರೀದಿ ಮಾಡಿದರೆ ಮಾತ್ರ ಯೂರಿಯಾ ನೀಡುತ್ತೇವೆಂದು ರೈತರ ಮೇಲೆ ಒತ್ತಡ ಹಾಕುತ್ತಿರುವುದು ಯಾವ ನ್ಯಾಯವಾಗಿದೆ ೩೦೦ ರೂ ಯೂರಿಯಾ ಮೂಟೆಗೆ ಬದಲಿಯಾಗಿ ೩ ಸಾವಿರ ರೂಪಾಯಿ ಗೊಬ್ಬರವನ್ನು ಖರೀದಿಸುವಂತೆ ಒತ್ತಡ ಹೇರುತ್ತಾರೆ ಯೂರಿಯವನ್ನು ಆಂದ್ರಕ್ಕೆ ಅಕ್ರಮವಾಗಿ ಮಾರಾಟಮಾಡುತ್ತಿದ್ದಾರೆಂದು ನೊಂದ ರೈತ ಮಂಗಸಂದ್ರ ತಿಮ್ಮಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ಮುಂಗಾರು ಮಳೆ ಉತ್ತಮ ನಿರೀಕ್ಷೆಯಲ್ಲಿದ್ದ ರೈತರು ಕೃಷಿ ಚಟುವಟಗಳಿಗೆ ಅವಶ್ಯಕತೆ ಇರುವ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮಾಡಿಕೊಂಡು ಖಾತರದಿಂದ ಮುಂಗಾರು ಮಳೆಗೆ ಕಾಯುತ್ತಿದ್ದ ರೈತರಿಗೆ ಬರಸಿಡಿಲು ಬಂಡಿದಂತಾಗಿದೆ. ಯಾಕೋ ಮುಂಗಾರು ಮಳೆ ರೈತನ ಮೇಲೆ ಮುನಿಸಿಕೊಂಡು ವರ್ಷದ ಗಂಜಿಪಾತ್ರೆಯನ್ನು ಕಸಿದುಕೊಂಡಿರುವುದು ವಿಪರ್ಯಾಸ. ಜೊತೆಗೆ ಬಿತ್ತನೆಯಾಗಿರುವ ಶೇಕಡ ೧೦ ರಷ್ಟರ ಕೃಷಿ ರಾಗಿ ಮತ್ತಿತರ ಬೆಳೆಗಳಿಗೆ ಅವಶ್ಯಕತೆ ಇರುವ ಯೂರಿಯಾ ಕೃತಕ ಅಭಾವ ಸೃಷ್ಟಿಸಿ ದುಬಾರಿ ಬೆಲೆಗೆ ಮಾರಾಟ ಮಾಡುವ ಮುಖಾಂತರ ರೈತರನ್ನು ಗೊಬ್ಬರ ಅಂಗಡಿ ಮಾಲೀಕರು ವಂಚನೆ ಮಾಡುತ್ತಿದ್ದರೂ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಮೌನವೇಕೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಪ್ರಶ್ನೆ ಮಾಡಿದರು.
ರಾಜ್ಯ ಸರ್ಕಾರ ಪ್ರತಿವರ್ಷ ಮುಂಗಾರು ಮಳೆ ಪ್ರಾರಂಭವಾದಾಗ ಕೃಷಿ ಮಂತ್ರಿಗಳು ಪತ್ರಿಕಾ ಮತ್ತು ಮಾದ್ಯಮಗಳ ಮುಖಾಂತರ ರಾಜ್ಯದಲ್ಲಿ ಮುಂಗಾರು ಮಳೆಯ ಕೃಷಿ ಬಿತ್ತನೆಗೆ ಅವಶ್ಯಕತೆ ಇರುವ ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಇಲ್ಲ. ಆಯಾ ಜಿಲ್ಲೆಯ ಕೃಷಿ ಕೇಂದ್ರಗಳಲ್ಲಿ ದಾಸ್ತಾನುವಾಗಿದೆ ಎಂದು ಹೇಳುತ್ತಿರುತ್ತಾರೆ. ಮತೊಂದಡೆ ಕೃತಕ ಅಭಾವ ಸೃಷ್ಟಿ ಮಾಡಿ ಬಿತ್ತನೆ ಬೀಜ ರಸಗೊಬ್ಬರಕ್ಕಾಗಿ ರೈತರು ಅಲೆದಾಡುವ ಜೊತೆಗೆ ಗೋಲಿಬಾರ್ ಲಾಟಿಚಾರ್ಜ್ ಆಗುತ್ತಿರುವ ಪ್ರಕರಣಗಳು ಪ್ರತಿವರ್ಷ ನಡೆಯುತ್ತಿರುವುದು ಕಾರಣವಾದರೂ ಏನು. ಕೃಷಿ ಮಂತ್ರಿಗಳಿಗೆ ಕೃಷಿ ಅಧಿಕಾರಿಗಳು ತಪ್ಪು ಮಾಹಿತಿಯ ಕೊರತೆ ನೀಡುತ್ತಿದ್ದಾರೆಯೇ ಎಂದು ಅವ್ಯವಸ್ಥ ವಿರುದ್ದ ಅಸಮದಾನ ವ್ಯಕ್ತಪಡಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕ ಮಹೇಶ್ ಯುರಿಯಾ ಖರೀದಿ ಮಾಡುವ ರೈತರಿಗೆ ಪರ್ಯಾಯ ಗೊಬ್ಬರ ಲಿಂಕ್ ಮಾಡಿ ಡಿ.ಎ.ಪಿ ಗೊಬ್ಬರ ತೆಗೆದುಕೊಂಡರೆ ಯೂರಿಯಾ ನೀಡುತ್ತೇವೆ ಎಂಬ ರೈತರ ದೂರುಗಳು ಇಲಾಖೆಗೆ ಬಂದಿವೆ. ಜೊತಗೆ ಪರವಾನಿಗೆ ಪಡೆದು ಯೂರಿಯಾವನ್ನು ಅಕ್ರಮ ದಾಸ್ತಾನು ಮಾಡಿ ದುಪಟ್ಟು ಬೆಲೆಗೆ ಮಾರಾಟ ಮಾಡುವ ಅಂಗಡಿಗಳ ವಿರುದ್ದ ಕ್ರಮಕೈಗೊಂಡು ರೈತರಿಗೆ ಸರ್ಕಾರ ನಿಗಧಿ ಮಾಡುವ ಬೆಲೆಗೆ ನೀಡುವಂತೆ ನೋಟಿಸ್ ಕೊಡಿಸಿ ಸಮಸ್ಯೆ ಬಗೆ ಹರಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ವಕ್ಕಲೇರಿ ಹನುಮಯ್ಯ, ಯಾರಂಘಟ್ಟ ಗಿರೀಶ್, ನರಸಿಂಹಯ್ಯ, ಕುವಣ್ಣ, ವೆಂಕಟೇಶಪ್ಪ, ಮಾಸ್ತಿ ಯಲ್ಲಣ್ಣ, ಹರೀಶ್, ಮುಂತಾದವರು ಇದ್ದರು.