ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪುಂದ ಗ್ರಾಮದ ಹೊಸೂರು ಮನೆ ಎಂಬಲ್ಲಿರುವ ದತ್ತಾತ್ರೇಯ ಶೇಟ್ ರವರಿಗೆ ಸೇರಿದ ತೋಟದ ಮಧ್ಯದಲ್ಲಿರುವ ಶೆಡ್‌ನಲ್ಲಿ ಅಕ್ರಮವಾಗಿ ಪಟಾಕಿ ದಾಸ್ತಾನು ಇಟ್ಟಿರುತ್ತಾರೆ ಎಂದು ಅ.9ರಂದು ಬಂದಿರುವ ಮಾಹಿತಿಯ ಹಿನ್ನೆಲೆಯಲ್ಲಿ ಬೈಂದೂರು ಠಾಣೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಈ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ಶೆಡ್‌ನೊಳಗೆ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ 4 ದೊಡ್ಡ ಡ್ರಮ್ ಗಳಲ್ಲಿ ಹಾಗೂ ಟ್ರೇಗಳಲ್ಲಿ ದಾಸ್ತಾನು ಇರಿಸಿದ್ದ ಸುಮಾರು 2.30,000/- ಮೌಲ್ಯದ ವಿವಿಧ ನಮೂನೆಗಳ ಹಾಗೂ ಮಾದರಿಯ ಪಟಾಕಿ ಹಾಗೂ ಇತರ ಸುಡುಮದ್ದುಗಳನ್ನು ಕಂಡುಬಂದ ಹಿನ್ನೆಲೆ, ಕೂಡಲೇ ಅವುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ತಂಡಕ್ಕೆ ಉಡುಪಿ ಜಿಲ್ಲೆಯ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ದಲಿಂಗಪ್ಪ ಮತ್ತು ಪರಮೇಶ್ವರ ಹೆಗಡೆ ರವರು ಪ್ರಶಂಶಿಸಿರುತ್ತಾರೆ.