ಸತತ 500 ವರ್ಷಗಳಿಗೂ ಅಧಿಕ ಹೋರಾಟದ ಅಂತಿಮ ಫಲವಾಗಿ ಇಂದು ಅಯೋಧ್ಯಾ ರಾಮ ಮಂದಿರ ಅಧಿಕೃತವಾಗಿ ಲೋಕಾರ್ಪಣೆಗೊಂಡಿದೆ. ಇಡೀ ದೇಶವೇ ಕಾದು ಕುಳಿತಿದ್ದ ಈ ಸುಸಂದರ್ಭ ನಿರ್ವಿಘ್ನವಾಗಿ ನೆರವೇರಿದೆ.
ಅಯೋಧ್ಯಾ ರಾಮ ಮಂದಿರದಲ್ಲಿ ಭಗವಾನ್ ಶ್ರೀರಾಮ ಬಾಲ್ಯ ಸ್ವರೂಪದ ಬಾಲ ರಾಮನ ಮೂರ್ತಿ ಅನಾವರಣಗೊಂಡಿದೆ. ಈ ಪ್ರಾಣ ಪ್ರತಿಷ್ಠಾಪನಾ ವಿಧಿ ವಿಧಾನದಲ್ಲಿ ಭಾರತದ ಸಾವಿರಾರು ಗಣ್ಯರ ಜೊತೆಯಲ್ಲೇ ವಿದೇಶಗಳ 92 ಗಣ್ಯ ಅತಿಥಿಗಳೂ ಭಾಗವಹಿಸಿದ್ದರು. ಈ ಮೂಲಕ ಭಾರತದ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು!
ಶತಮಾನಗಳಿಂದ ನಡೆದು ಬಂದ ರಾಮ ಜನ್ಮಭೂಮಿ ವಿವಾದ ಇಂದಿಗೆ ಅಧಿಕೃತವಾಗಿ ಕೊನೆಯಾಗಿದೆ. 2.7 ಎಕರೆ ವಿಸ್ತೀರ್ಣದ ರಾಮ ಮಂದಿರದಲ್ಲಿ 51 ಇಂಚು ಎತ್ತರದ ಶ್ರೀಬಾಲರಾಮನ ಮೂರ್ತಿಗೆ ಪ್ರಾಣ ನೀಡಲಾಗಿದೆ.