ಅಂಬ್ಲಿಕಲ್ ಶಾಲೆಯ ಮುಖ್ಯ ಶಿಕ್ಷಕನ ವರ್ಗಾವಣೆಗೆ ಎಸ್ಎಫ್ಐ ಒತ್ತಾಯ

ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲೂಕಿನ ಅಂಬ್ಲಿಕಲ್‌ ಶಾಲೆಯ ಮುಖ್ಯ ಶಿಕ್ಷಕ ಶ್ರೀರಾಮಪ್ಪ ಅವರನ್ನು ವರ್ಗಾವಣೆ ಮಾಡುವಂತೆ ಎಸ್ಎಫ್ಐ ವಿಧ್ಯಾರ್ಥಿ ಸಂಘಟನೆಯಿಂದ ಮಂಗಳವಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಅಧ್ಯಕ್ಷ ಅಂಬ್ಲಿಕಲ್ ಎನ್ ಶಿವಪ್ಪ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಬಡವರ ಮಕ್ಕಳು ಹೆಚ್ಚಾಗಿ ವಿಧ್ಯಾಭ್ಯಾಸ ಮಾಡುತ್ತಿದ್ದು, ಶಾಲೆಯ ಅಭಿವೃದ್ಧಿ ವಿಚಾರವಾಗಿ ಮುಖ್ಯ ಶಿಕ್ಷಕ ಶ್ರೀರಾಮಪ್ಪನೊಂದಿಗೆ ಗ್ರಾಮಸ್ಥರು ಭೇಟಿ ನೀಡಿದಾಗ ಏಕವಚನದಲ್ಲಿ ಮಾತಾಡೋದು ಹಿರಿಯರಿಗೆ ಗೌರವ, ಮರ್ಯಾದೆ ಕೊಡೊದಿಲ್ಲ ಜೊತೆಗೆ ವಿದ್ಯಾರ್ಥಿಗಳನ್ನು ಮನಬಂದಂತೆ ಹೊಡೆದು ನಿಮ್ಮ ತಂದೆ ತಾಯಿಗೆ ತಿಳಿಸಿದರೆ ನಿಮ್ಮನ್ನು ಶಾಲೆಯಿಂದ ಹೊರಹಾಕುತ್ತೇನೆಂದು ಬೆದರಿಕೆ ಹಾಕುತ್ತಾರೆ ಎಂದು ಆರೋಪಿಸಿದರು

ಶಾಲೆಯಲ್ಲಿ ಹಿಂದೆ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ಕೆ.ಸರಿತ ರವರು, ಮುಖ್ಯ ಶಿಕ್ಷಕ ಶ್ರೀರಾಮಪ್ಪನ ದೌರ್ಜನ್ಯ, ದಬ್ಬಾಳಿಕೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡಿರುವುದರಿಂದ ಆ ಶಿಕ್ಷಕಿ ಸಹ ಯಾರಿಗೂ ಗೊತ್ತಿಲ್ಲದೆ ಸ್ವಯಂ ಪ್ರೇರಿತವಾಗಿ ವರ್ಗಾವಣೆ ಮಾಡಿಕೊಂಡು ಹೋಗಿದ್ದಾರೆ ವಿಧ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮುಖ್ಯ ಶಿಕ್ಷಕ ಶ್ರೀರಾಮಪ್ಪ ರವರನ್ನು ವರ್ಗಾವಣೆ ಮಾಡಿ ಬೇರೆ ಶಿಕ್ಷಕರನ್ನು ವರ್ಗಾವಣೆ ಮಾಡಿ ವಿಧ್ಯಾರ್ಥಿಗಳಿಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ ಎಸ್ಎಫ್ಐ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಬೀರಾಜು, ಜಿಲ್ಲಾ ಉಪಾಧ್ಯಕ್ಷ ಸುರೇಶ್ ಬಾಬು, ಜಿಲ್ಲಾ ಸಹ ಕಾರ್ಯದರ್ಶಿಗಳಾದ ಶಶಿಕುಮಾರ್, ಸುದರ್ಶನ್, ಅಂಬ್ಲಿಕಲ್ ಗ್ರಾಮಸ್ಥರಾದ ವಿಜಯಕುಮಾರ್, ಚನ್ನಕೇಶವ, ತಿಪ್ಪಣ್ಣ, ವೆಂಕಟರಣಪ್ಪ, ಮಂಜುನಾಥ್, ವಿಜಯ್ ಮುಂತಾದವರು ಇದ್ದರು.

Leave a Reply

Your email address will not be published. Required fields are marked *

error: Content is protected !!