ದೊಡ್ಡಬಳ್ಳಾಪುರ:ತಾಲೂಕು ಫೋಟೋ ಮತ್ತು ವಿಡಿಯೋ ಛಾಯಾಗ್ರಾಹಕರ ಸಂಘದ ಮಾಜಿ ಅಧ್ಯಕ್ಷ, ಅಂತಾರಾಷ್ಟ್ರೀಯ ಛಾಯಾಗ್ರಾಹಕ ಜಿ.ರಾಜು ಅವರಿಗೆ ಕರ್ನಾಟಕ ಛಾಯಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕರ್ನಾಟಕ ವಿಡಿಯೋ ಮತ್ತು ಫೋಟೋ ಅಸೋಸಿಯೇಷನ್ (ರಿ.)” ಮತ್ತು ” ಬೈಸೇಲ್ ಇಂಟ್ರಾಕ್ಷನ್ಸ್ ಪ್ರವೇಟ್ ಲಿಮಿಟೆಡ್ ಸಹಯೋಗ ದೊಂದಿಗೆ, ಬೆಂಗಳೂರಿನ ಅರಮನೆ ಮೈದಾನದ “ತ್ರಿಪುರ ವಾಸಿನಿ” ಯಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಟ್ಟದ “ಪೋಟೋ
ಟುಡೇ ವಸ್ತು ಪ್ರದರ್ಶನದಲ್ಲಿ “ಕರ್ನಾಟಕ ಛಾಯಾರತ್ನ ಪ್ರಶಸ್ತಿಯನ್ನು ರಾಜು ರವರಿಗೆ ಕನ್ನಡ ಚಿತ್ರರಂಗದ ನಟ ಪ್ರತಮ್ ಅವರು ವಿತರಿಸಿ,ಗೌರವಿಸಿದರು.
ಶುಕ್ರವಾರ ರಾಜಧಾನಿಯಲ್ಲಿ ನಡೆದ ಮೊದಲ ದಿನದ ವಸ್ತು ಪ್ರದರ್ಶನದಲ್ಲಿ ಒಟ್ಟು ಏಳು ಮಂದಿ ಮಹಿಳಾ ಛಾಯಾಗ್ರಾಹಕಿಯರು ಸೇರಿದಂತೆ 52ಮಂದಿ ಛಾಯಾಗ್ರಾಹಕರಿಗೆ ಕರ್ನಾಟಕ ಛಾಯಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದೊಡ್ಡಬಳ್ಳಾಪುರ ನಗರದ ಹೊರವಲಯದ ಬಾಶೆಟ್ಟಿಹಳ್ಳಿಯ ಮಂಜುನಾಥ್ ಸ್ಟುಡಿಯೋ ಮಾಲೀಕರಾದ ಜಿ.ರಾಜು ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಕರ್ನಾಟಕ ಛಾಯಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶ್ನಿಸ್ತಿ ಸ್ವೀಕರಿಸಿದ ರಾಜು ರವರು ಮಾದ್ಯಮ ದೊಂದಿಗೆ ಮಾತನಾಡುತ್ತಾ ಛಾಯಾಚಿತ್ರ ಕಲೆಯನ್ನು ಕಲಿಸಿದ ಗುರುಗಳಿಗೆ ಹಾಗೂ ನನ್ನ ಗ್ರಾಹಕರಿಗೆ ಈ ಪ್ರಶಸ್ತಿಯನ್ನು ಅರ್ಪಿಸಲಾಗುವುದೆಂದರು.
ಕಾರ್ಯಕ್ರಮದಲ್ಲಿ ಕಿರುತೆರೆ ನಟ ವಿಕ್ರಂ ಸೂರಿ, ಸಿನಿಮಾಟೋಗ್ರಾಫರ್ ಜಿಜಿ ಕೃಷ್ಣ, ನಿಕಾನ್ ಮುಖ್ಯಸ್ಥ ಸಜ್ಜನ್,ಕೆವಿಪಿಎ ಅಧ್ಯಕ್ಷ ಬೆಂಜಮಿನ್, ಪದಾಧಿಕಾರಿಗಳಾದ ಕೃಷ್ಣಪ್ಪ, ಜಗದೀಶ್ ಮತ್ತಿತರರಿದ್ದರು.