ಅಂಡರ್ ಪಾಸ್ ನಿರ್ಮಿಸುವಂತೆ ಮೋಪರಹಳ್ಳಿ ಗ್ರಾಮಸ್ಥರ ಆಗ್ರಹ

ತಾಲ್ಲೂಕಿನ ಮೋಪರಹಳ್ಳಿಯ ಜನ, ಜಾನುವಾರುಗಳು, ಶಾಲಾಮಕ್ಕಳು ಸುಗಮವಾಗಿ ಚಲಿಸಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಡರ್ ಪಾಸ್  ಬೇಕು ಎಂದು ಮೋಪರಹಳ್ಳಿಯಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿಗೆ ಮನವಿ ಮಾಡಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಹೊಸಕೋಟೆಯಿಂದ ದಾಬಸ್ ಪೇಟೆ ರಸ್ತೆಯನ್ನು ಅಗಲೀಕರಣ ಮಾಡಲಾಗುತ್ತಿದ್ದು, ರಸ್ತೆಯ ಕಾಮಗಾರಿಯು  ಮೋಪರಹಳ್ಳಿಯಲ್ಲಿ ನಡೆಸಲಾಗುತ್ತಿದೆ. ಮೋಪರಹಳ್ಳಿಯಲ್ಲಿ ಇರುವ ಶಾಲೆಗೆ ಶಾಲಾ ಮಕ್ಕಳು ಶಾಲೆಗೆ ಬರಲು, ಶಾಲೆಗೆ ಹೋಗಲು ಮತ್ತು ರೈತರು, ಜನ ಜಾನುವಾರುಗಳು ಪಕ್ಕದ ಜಮೀನುಗಳಿಗೆ ಸುಗಮವಾಗಿ ಹೋಗಲು ಕಷ್ಟವಾಗುತ್ತಿರುವುದಲ್ಲದೇ ಈ ರಸ್ತೆಯಲ್ಲಿ ಅಪಘಾತಗಳು ಆಗುತ್ತಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಖುದ್ದು ಸ್ಥಳ ಪರಿಶೀಲನೆ ಮಾಡಿ ಅಂಡರ್ ಪಾಸ್ ರಸ್ತೆಯನ್ನು ಮಾಡಿಸಿ ಶಾಲಾ ಮಕ್ಕಳಿಗೆ, ರೈತರಿಗೆ, ಜನ  ಜಾನುವಾರುಗಳಿಗೆ ಅನುಕೂಲ ಮಾಡಿಕೊಡಬೇಕು   ಎಂದು ಮೋಪರಹಳ್ಳಿ ಗ್ರಾಮಸ್ಥರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮೋಪರಹಳ್ಳಿ ಗ್ರಾಮಸ್ಥರಾದ ರವಿಕುಮಾರ್, ಎಂ.ಪಿ ನಾಗರಾಜ್,                 ಮುನಿಆಂಜಿನಪ್ಪ, ಸುರೇಶ, ವೆಂಕಟೇಶ್, ರಾಮಪ್ಪ, ಹನುಮಂತಗೌಡ, ರಾಮಾಂಜಿನಪ್ಪ, ಆನಂದ, ಮುನಿರಾಜ, ನಾಗೇಶ, ಚನ್ನಕೃಷ್ಣ, ಮಾರಪ್ಪ, ಮುರಳಿ ಎಂ.ಹನುಮಂತಗೌಡ, ರಾಮಾಂಜಿನಪ್ಪ, ಗಂಗರಾಜ, ರಮೇಶ, ನಾರಾಯಣಪ್ಪ, ಮುನಿಆಂಜಿನಪ್ಪ, ಆಂಜಿನಪ್ಪ, ರಮೇಶ್, ಹನುಮರಾಜ, ಹರೀಶ, ರಾಮಾಂಜಿನಪ್ಪ, ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *