ಅಂಗವಿಕಲರಿಗೆ ಸರ್ಕಾರ ಮತ್ತು ಸ್ವಯಂ ಸೇವಾ ಸಂಘಗಳಿಂದ ಸಿಗುವ ಸೌಲಭ್ಯಗಳು ಸದುಪಯೋಗವಾಗಬೇಕು-ಶ್ರೀನಿವಾಸ್

ಕೋಲಾರ: ಸಮಾಜದಲ್ಲಿ ಅಂಗವಿಕಲರಿಗೆ ಹಾಗೂ ವಿಕಲಚೇತನರಿಗೆ ಎಪಿಡಿ ಬೆಂಗಳೂರು ಮತ್ತು ಫೆವಾರ್ಡ್ ಕೋಲಾರ ಜಿಲ್ಲಾ ಒಕ್ಕೂಟದಿಂದ ಅವಶ್ಯಕ ಮಾಹಿತಿ ಮತ್ತು ಸೌಲಭ್ಯಗಳನ್ನು ಒದಗಿಸಲು ಸಿದ್ದವಿದ್ದು ಇದರ ಸದುಪಯೋಗವನ್ನು ಪ್ರತಿಯೊಬ್ಬ ರಿಗೂ ಸಿಗುವಂತಾಗಬೇಕು ಎಂದು ಎಪಿಡಿ ಸಂಸ್ಥೆಯ ರಾಜ್ಯದ ವಲಯ ವ್ಯವಸ್ಥಾಪಕ ಶ್ರೀನಿವಾಸ್ ತಿಳಿಸಿದರು.

ನಗರದ ವಿದ್ಯಾಲಯ ಸಂಹೆ ಸಭಾಂಗಣದಲ್ಲಿ ಎಪಿಡಿ ಸಂಸ್ಥೆ ಬೆಂಗಳೂರು ಹಾಗೂ ಫೆವಾರ್ಡ್ ಜಿಲ್ಲಾ ಒಕ್ಕೂಟದಿಂದ ಶನಿವಾರ ಅಂಗವಿಕಲರ ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರಿಗೆ ಒಂದು ದಿನದ ಕಾರ್ಯಾಗಾರದಲ್ಲಿ ಮಾಹಿತಿ‌ ನೀಡಿ ಮಾತನಾಡಿದ ಅವರು ಈ ಸಂಸ್ಥೆಗಳ ಜೊತೆಯಲ್ಲಿ ಸರ್ಕಾರಿ, ಅರೆಸರ್ಕಾರಿ ಹಾಗೂ ಸಿಎಸ್ಆರ್ ಅನುದಾನದ ಮೂಲಕ ಅಂಗವಿಕಲರಿಗೆ ಹಾಗೂ ವಿಕಲಚೇತನರಿಗೆ ಸೌಲಭ್ಯಗಳನ್ನು ಒದಗಿಸಲು ಸಂಬಂಧಿಸಿದವರನ್ನು ಮುಂದಿನ ದಿನಗಳಲ್ಲಿ ಒತ್ತಾಯಿಸಬೇಕಾಗುತ್ತದೆ ಎಂದು ಕಾರ್ಯಾಗಾರದಲ್ಲಿ ಚರ್ಚೆ ನಡೆಸಿದರು.

ಅಂಗವಿಕಲರು ಮತ್ತು ವಿಕಲಚೇತನರಿಗೆ ಅನುಕೂಲವಾಗುವಂತೆ ಹೋಟೆಲ್, ಶಾಲಾ ಕಾಲೇಜುಗಳು, ರೈಲ್ವೆ, ಬಸ್ ನಿಲ್ದಾಣ, ಆಸ್ಪತ್ರೆ, ಪಾರ್ಕ್, ಶೌಚಾಲಯ ಸೇರಿದಂತೆ ಇತರೆ ಕಡೆಗಳಲ್ಲಿ ಅವರಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಚರ್ಚೆ ನಡೆಸಲಾಯಿತು ಸಮಾಜದ ಭಾಗವಾಗಿ ಗುರುಸಿಕೊಳ್ಳುವ ಮೂಲಕ ಮುಖ್ಯವಾಹಿನಿಗೆ ಬರಲು ಬೇಕಾದ ಸೌಲಭ್ಯಗಳನ್ನು ನೀಡುವಂತೆ ಒತ್ತಾಯಿಸಬೇಕು ಇವರ ಮಧ್ಯೆ ಕೆಲಸ ಮಾಡಲು ಸ್ವಯಂ ಸೇವಕರನ್ನು ಗುರುತಿಸಲು ಚರ್ಚಿಸಲಾಯಿತು.

ಕಾರ್ಯಾಗಾರದಲ್ಲಿ ಫೆವಾರ್ಡ್ ಕರ್ನಾಟಕ ರಾಜ್ಯ ಸಂಪನ್ಮೂಲಗಳ ಮ್ಯಾಫಿಂಗ್ ಸಂಯೋಜಕರಾದ ರಿನೀಟಾ, ಜಿಲ್ಲಾ ಒಕ್ಕೂಟದ ಅಧ್ಯಕ್ಷ ಫೋಕಸ್ ಅ‌.ನಾ ಹರೀಶ್, ಕಾರ್ಯದರ್ಶಿ ರತ್ನ ನಾಗರಾಜ್, ಎಪಿಡಿ ಸಂಸ್ಥೆಯ ಜಿಲ್ಲಾ ಸಂಯೋಜಕಿ ಗಿರಿಜಾ, ವಿವಿಧ ಸೇವಾ ಸಂಸ್ಥೆಗಳ ಮುಖ್ಯಸ್ಥರಾದ ಮಾಲೂರು ಸುಬ್ರಮಣಿ ಮುಳಬಾಗಿಲು ಕೃಷ್ಣಮೂರ್ತಿ, ಮಂಜುಳಾರೆಡ್ಡಿ, ಮುನಿರಾಜು, ಮಾಲೂರು ಸುಬ್ರಮಣಿ, ಕೆಜಿಎಫ್ ಸುಬ್ರಮಣಿ ಮುಂತಾದವರು ಇದ್ದರು

Leave a Reply

Your email address will not be published. Required fields are marked *