ದೊಡ್ಡಬಳ್ಳಾಪುರ: ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಚೈನ್ ಕಳ್ಳರ ಹಾವಳಿ ಮತ್ತೆ ಮುಂದುವರೆದಿದೆ. ದಂಪತಿ ಬೈಕ್ ನಲ್ಲಿ ಹೋಗುವಾಗ ಹಿಂಬದಿಯಿಂದ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಮಹಿಳೆಯ ಕೊರಳಲ್ಲಿದ್ದ 45 ಗ್ರಾಂ. ತೂಕದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿರುವ ಘಟನೆ ಮಾರಸಂದ್ರ ಅಪಾರ್ಟ್ಮೆಂಟ್ ಬಳಿ ನಡೆದಿದೆ.
ದೊಡ್ಡಬಳ್ಳಾಪುರ ನಗರದ ಕಲ್ಲುಪೇಟೆ ನಿವಾಸಿಗಳಾದ ರಮೇಶ್ ದಂಪತಿ ಅನಾರೋಗ್ಯದ ಹಿನ್ನೆಲೆ ಮಂಗಳವಾರ ಮಧ್ಯಾಹ್ನ ರಾಜಾನುಕುಂಟೆ ಬಳಿ ಆಸ್ಪತ್ರೆಗೆ ತೋರಿಸಿ ವಾಪಾಸ್ ದೊಡ್ಡಬಳ್ಳಾಪುರದ ಕಡೆ ಬರುವ ವೇಳೆ ಈ ದುರ್ಘಟನೆ ಸಂಭವಿಸಿದೆ.
ನಂಬರ್ ಪ್ಲೇಟ್ ಇಲ್ಲದ ಬೈಕ್ ನಲ್ಲಿ ಇಬ್ಬರು ದುಷ್ಕರ್ಮಿಗಳು ಮುಖಕ್ಕೆ ಮಾಸ್ಕ್ ಹಾಗೂ ಹೆಲ್ಮೆಟ್ ಧರಿಸಿಕೊಂಡು ದಂಪತಿ ಬೈಕ್ ಹಿಂಬಾಲಿಸಿಕೊಂಡು ಬಂದು ರೈಡಿಂಗ್ನಲ್ಲಿದ್ದಂತೆ ಹಿಂಬದಿ ಕುಳಿತಿದ್ದ ಮಹಿಳೆಯ ಕೊರಳಲ್ಲಲಿದ್ದ ಚಿನ್ನದ ಸರಕ್ಕೆ ಕೈಹಾಕಿ ಎಳೆದು ದೊಡ್ಡಬಳ್ಳಾಪುರದ ಕಡೆಗೆ ಪರಾರಿಯಾಗಿದ್ದಾರೆ.
ಸುಮಾರು 5 ಲಕ್ಷ ಬೆಲೆ ಬಾಳುವ 45 ಗ್ರಾಂ. ತೂಕದ ಚಿನ್ನದ ಸರ ಕಳೆದುಕೊಂಡ ದಂಪತಿ ದಿಕ್ಕು ತೋಚದೆ ಘಟನೆ ಸಂಬಂಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.