ಗಾಳಮ್ಮ ದೇವರಿಗೆ ಹರಕೆಗೆ ಬಿಟ್ಟಿದ್ದ ಮೇಕೆ ಹೋತ ಕಳವು ಮಾಡಿರುವ ಘಟನೆ ತಡರಾತ್ರಿ ದೊಡ್ಡಬಳ್ಳಾಪುರ ತಾಲೂಕಿನ ಕೆಳಗಿನಜೂಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ಮುನಿಯಪ್ಪ ಎಂಬುವವರು ಸಾಕಿದ್ದ ಮೇಕೆ ಹೋತವನ್ನು ಗ್ರಾಮ ದೇವತೆ ಗಾಳಮ್ಮ ದೇವರಿಗೆ ಹರಕೆಗೆ ಬಿಟ್ಟಿದ್ದರು. ಎಂದಿನಂತೆ ಮನೆ ಮುಂದೆ ಇರುವ ಕೊಟ್ಟಿಗೆಯಲ್ಲಿ ಹೋತವನ್ನು ಕಟ್ಟಿದ್ದರು. ಊಟ ಮಾಡಿ ಮಲಗುವವರೆಗೂ ಇದ್ದ ಹೋತ ಬೆಳಗ್ಗೆ ಎದ್ದು ನೋಡಿದರೆ ಹೋತ ನಾಪತ್ತೆಯಾಗಿದೆ.
ಈ ಮೇಕೆಹೋತ ಸಮಾರು 8 ರಿಂದ 10 ಸಾವಿರ ಬೆಲೆ ಬಾಳುತ್ತಿತ್ತು ಎಂದು ರೈತ ಮುನಿಯಪ್ಪ ತಿಳಿಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.